Select Your Language

Notifications

webdunia
webdunia
webdunia
webdunia

ಶ್ರೀ ಕೃಷ್ಣನಂತೆ ದುಷ್ಟರ ವಿರುದ್ಧ ನಟಿ ಕಂಗನಾ ಹೋರಾಟ

ಶ್ರೀ ಕೃಷ್ಣನಂತೆ ದುಷ್ಟರ ವಿರುದ್ಧ ನಟಿ ಕಂಗನಾ ಹೋರಾಟ
ಮುಂಬೈ , ಶನಿವಾರ, 12 ಸೆಪ್ಟಂಬರ್ 2020 (22:30 IST)
ಬಾಲಿವುಡ್‌ ನಟಿ ಕಂಗನಾ ರಣಾವತ್ ಶ್ರೀಕೃಷ್ಣನಂತೆ ದುಷ್ಟರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಹೀಗಂತ ನಟಿ ಕಂಗನಾ ತಂದೆ ಅಮರದೀಪ್ ಹೇಳಿರೋ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ, ಕಂಗನಾ ತನ್ನ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಹಂಚಿಕೊಂಡಿದ್ದು, ಕುಟುಂಬ ಸಂಭಾಷಣೆಯ ವಿಡಿಯೋವೊಂದರಲ್ಲಿ ಆಕೆಯ ತಂದೆ ಅಮರದೀಪ್ ರನೌತ್ ತನ್ನ ಮಗಳ ಸುತ್ತಲಿನ ವಿವಾದಗಳ ಬಗ್ಗೆ ಆತಂಕದಲ್ಲಿದ್ದರು ಎಂಬುದನ್ನು ತೋರಿಸಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಯಾರೊಂದಿಗೂ ಜಗಳವಾಡಬಾರದೆಂದು ಕಂಗನಾ ಅವರಿಗೆ ಅಮರದೀಪ್ ಹೇಳಿದ್ದಾರೆ.

ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಭಾರತದ ಅತ್ಯಂತ ಮೆಚ್ಚುಗೆ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ಕಂಗನಾ ರಣಾವತ್, ಹಿಂದಿ ಚಲನಚಿತ್ರೋದ್ಯಮದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ಅಪರಾಧದ ವಿರುದ್ಧದ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಲಿರೋ ನಟಿ ಕಂಗನಾ ರಣಾವತ್