Select Your Language

Notifications

webdunia
webdunia
webdunia
webdunia

ನಟಿ ಕಂಗನಾ ರಣಾವತ್ ನೆಲಕ್ಕುರುಳಿದ ಕಚೇರಿಯಲ್ಲಿ ನೋಡಿದ್ದೇನು?

ನಟಿ ಕಂಗನಾ ರಣಾವತ್ ನೆಲಕ್ಕುರುಳಿದ ಕಚೇರಿಯಲ್ಲಿ ನೋಡಿದ್ದೇನು?
ಮುಂಬೈ , ಶುಕ್ರವಾರ, 11 ಸೆಪ್ಟಂಬರ್ 2020 (17:40 IST)
ಬಾಲಿವುಡ್ ನಟಿ ಕಂಗನಾ ರಣಾವತ್ ರ ಕಚೇರಿಯನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಬಿಎಂಸಿ ನೆಲಕ್ಕೆ ಉರುಳಿಸಿದೆ.

ಈ ನಡುವೆ ತಮ್ಮ ಕೆಡವಲಾಗಿರುವ ತಮ್ಮ ಕಚೇರಿಗೆ ನಟಿ ಕಂಗನಾ ರಣಾವತ್ ಭೇಟಿ ನೀಡಿದ್ದಾರೆ.

ಬಾಂದ್ರಾದಲ್ಲಿರುವ ತಮ್ಮ ಕಚೇರಿ ಸ್ಥಳಕ್ಕೆ ಭೇಟಿ ನೀಡಿದ ನಟಿ ಕಂಗನಾ, ಬೃಹನ್ಮುಂಬೈ ಮಹಾನಗರ ಪಾಲಿಕೆ ನೆಲಕ್ಕೆ ಉರುಳಿಸಿದ್ದ ತಮ್ಮ ಕಟ್ಟಡವನ್ನು ನೋಡಿದರು.

ಬಿಎಂಸಿ ಕಂಗನಾ ಅವರ ಪ್ರೊಡಕ್ಷನ್ ಹೌಸ್ - ಮಣಿಕರ್ನಿಕಾ ಫಿಲ್ಮ್ಸ್ ಕಚೇರಿಯ ಅಕ್ರಮ ಕಟ್ಟಡ ನಿರ್ಮಾಣಕ್ಕಾಗಿ ನೋಟಿಸ್ ನೀಡಿತ್ತು. ಈ ಮೊದಲು ಕಂಗನಾ ಅವರ ಸಹೋದರಿ ಮತ್ತು ವ್ಯವಸ್ಥಾಪಕ ರಂಗೋಲಿ ಚಾಂಡೆಲ್ ಬಾಂದ್ರಾ ಕಚೇರಿಗೆ ಭೇಟಿ ನೀಡಿದ್ದರು.

ನಟಿ ಕಂಗನಾ ಪ್ರತಿಕ್ರಿಯಿಸಿದ್ದು, ತಮ್ಮ ಕಚೇರಿ ನೆಲಸಮವಾದ ಬಳಿಕ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ದೂರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ರಣಬೀರ್ ಕಪೂರ್ – ಆಲಿಯಾ ಭಟ್ ರೋಮ್ಯಾನ್ಸ್