ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಕೇಸ್ ಹಾಗೂ ಡ್ರಗ್ಸ್ ಕೇಸ್ ನಲ್ಲಿ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ನಡುವೆ ನಡಿ ರಿಯಾ ಚಕ್ರವರ್ತಿಯನ್ನು ಭದ್ರತಾ ಸಮಸ್ಯೆಗಳಿಂದಾಗಿ ಪ್ರತ್ಯೇಕ ಜೈಲು ಕೋಣೆಗೆ ಶಿಫ್ಟ್ ಮಾಡಲಾಗಿದೆ.
ಬೈಕುಲ್ಲಾ ಮಹಿಳಾ ಜೈಲಿಗೆ ಕರೆದೊಯ್ಯಲ್ಪಟ್ಟ ರಿ ಚಕ್ರವರ್ತಿಯನ್ನು ಭದ್ರತಾ ಕಾರಣಗಳಿಗಾಗಿ ಪ್ರತ್ಯೇಕ ಸೆಲ್ ಗೆ ಸ್ಥಳಾಂತರಿಸಲಾಗಿದೆ.
ಮಾದಕವಸ್ತು ನಿಯಂತ್ರಣ ಬ್ಯೂರೋ ದಿಂದ ಡ್ರಗ್ಸ್ ಸೇವನೆ / ಮಾರಾಟ / ಖರೀದಿ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ಬಂಧಿಸಿತ್ತು. ಬಂಧನ ನಡೆಯುವ ಮೊದಲು ನಟಿಯನ್ನು ಎನ್‌ಸಿಬಿ ಅಧಿಕಾರಿಗಳು ಸುಮಾರು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದರು.
ರಿಯಾ ಸಹೋದರ ಶೋಯಿಕ್ ಚಕ್ರವರ್ತಿಯನ್ನು ಬಂಧಿಸಲಾಗಿದೆ. ರಿಯಾ ಮತ್ತು ಶೋಯಿಕ್ ಜೊತೆಗೆ, ಸ್ಯಾಮ್ಯುಯೆಲ್ ಮಿರಾಂಡಾ, ದೀಪೇಶ್ ಸಾವಂತ್, ಜೈದ್ ವಿಲಾತ್ರಾ ಮತ್ತು ಅಬ್ದುಲ್ ಬಸಿತ್ ಪರಿಹಾರ್ ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.