ಬಿಗ್ ಬಾಸ್ 14 ಸರಣಿ ಆರಂಭಕ್ಕೆ ಮೊದಲೇ ಕುತೂಹಲ ಮೂಡಿಸುತ್ತಿದೆ. ಈಗಾಗಲೇ ಬಿಡುಗಡೆಗೊಂಡಿರುವ ಪ್ರೊಮೋ ವೈರಲ್ ಆಗಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 14 ರ ಪ್ರೀಮಿಯರ್ ನೈಟ್ ಎಪಿಸೋಡಿಗಾಗಿ ಮೂರು ದಿನಗಳ ಮುಂಚಿತವಾಗಿ ಚಿತ್ರೀಕರಣ ಮಾಡಲಾಗುತ್ತಿದೆ.
ಬಿಗ್ ಬಾಸ್ 14 ಇತ್ತೀಚಿನ ದಿನಗಳಲ್ಲಿ ಹೆಚ್ಚು ನಿರೀಕ್ಷಿತ ಮತ್ತು ಹೆಚ್ಚು ಪ್ರಚಾರ ಪಡೆದಿರುವ ರಿಯಾಲಿಟಿ ಟಿವಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ವಿವಾದಾತ್ಮಕ ರಿಯಾಲಿಟಿ ಟಿವಿ ಕಾರ್ಯಕ್ರಮವಾಗಿರುವ ಬಿಗ್ ಬಾಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.