Publish Date: Mon, 07 Sep 2020 (10:45 IST)
Updated Date: Mon, 07 Sep 2020 (10:46 IST)
ಉಡುಪಿ : ದಲಿತ ಯುವಕನ ಮೇಲೆ ದೌರ್ಜನ್ಯ ಎಸಗಿದ ಹಿನ್ನಲೆಯಲ್ಲಿ ತೆಲುಗು ಬಿಗ್ ಬಾಸ್ ಸ್ಪರ್ಧಿ, ಸಿನಿಮಾ ನಿರ್ಮಾಪಕ ನೂತನ್ ನಾಯ್ಡುವನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ನೂತನ್ ನಾಯ್ಡು ತನ್ನ ಮನೆಯಲ್ಲಿ ಕೆಲಸಮಾಡಿಕೊಂಡಿದ್ದ 20 ವರ್ಷದ ದಲಿತ ಯುವಕ ಶ್ರೀಕಾಂತ್ ಮೇಲೆ ದೌರ್ಜನ್ಯ ಎಸಗಿ ತಲೆ ಬೋಳಿಸಿದ್ದಾನೆ. ಈ ಪ್ರಕರಣದಲ್ಲಿ 7 ಮಂದಿ ಸೇರಿಕೊಂಡಿದ್ದರು ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ನೂತನ್ ನಾಯ್ಡು ಮೇಲೆ ಎಸ್ ಸಿ/ಎಸ್ ಟಿ ಕಾಯ್ದೆಯಡಿ ದೂರು ದಾಖಲಾಗಿದ್ದು ಆತನಿಗಾಗಿ ಆಂಧ್ರ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಆತನ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದಾಗ ುಡುಪಿ ರೈಲ್ವೆ ಸ್ಟೇಷನ್ ನಲಲ್ಇ ಆತನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಆತನ ಮೊಬೈಲ್ ನ್ನು ವಶಕ್ಕೆ ಪಡೆದ ಪೊಲೀಸರು ಆಂಧ್ರ ಪೊಲೀಸರಿಗೆ ಒಪ್ಪಿಸಿದ್ದಾರೆ.