Select Your Language

Notifications

webdunia
webdunia
webdunia
webdunia

ಹುಟ್ಟುವ ಮಗು ಗಂಡೋ, ಹೆಣ್ಣೋ ತಿಳಿಯಲು ಪತ್ನಿಯ ಹೊಟ್ಟೆ ಕುಯ್ದ ಪತಿರಾಯ!

ಹುಟ್ಟುವ ಮಗು ಗಂಡೋ, ಹೆಣ್ಣೋ ತಿಳಿಯಲು ಪತ್ನಿಯ ಹೊಟ್ಟೆ ಕುಯ್ದ ಪತಿರಾಯ!
ಲಕ್ನೋ , ಭಾನುವಾರ, 20 ಸೆಪ್ಟಂಬರ್ 2020 (13:39 IST)
ಲಕ್ನೋ: ಹೆಣ್ಣು ಶಿಶುವಿನ ಹತ್ಯೆ ಮಾಡಬೇಡಿ ಎಂದೆಲ್ಲಾ ಎಷ್ಟೇ ಜಾಗೃತಿ ಮೂಡಿಸಿದರೂ ನಮ್ಮಲ್ಲಿ ಇನ್ನೂ ಕೆಲವರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಉತ್ತರ ಪ್ರದೇಶದಲ್ಲಿ ಪತಿರಾಯನೊಬ್ಬ ತನ್ನ ಪತ್ನಿಯ ಹೊಟ್ಟೆಯಲ್ಲಿ ಗಂಡು ಮಗುವಿದೆಯೇ ಎಂದು ಖಚಿತಪಡಿಸಲು ಆಕೆಯ ಹೊಟ್ಟೆಯನ್ನೇ ಸೀಳಿದ್ದಾನೆ!


ಈಗಾಗಲೇ ಈ ದಂಪತಿ ಐವರು ಹೆಣ್ಣು ಮಕ್ಕಳಿದ್ದಾರೆ. ಈಗ ಆರನೆಯದ್ದಾದರೂ ಗಂಡು ಮಗುವಾಗಬೇಕೆಂಬುದು ಪತಿ ಮಹಾಶಯನ ಬಯಕೆ. ಅದಕ್ಕಾಗಿ ಚಾಕುವಿನಿಂದ ಪತ್ನಿಯ ಹೊಟ್ಟೆ ಕುಯ್ದು ಪೈಶಾಚಿಕ ಕೃತ್ಯವೆಸಗಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಿನ ಮೇಲಿನ ಆಸೆಗೆ ಹುಟ್ಟಿದ ಹೆಣ್ಣುಮಗುವಿಗೆ ತಾಯಿ ಮಾಡಿದ್ದೇನು ಗೊತ್ತಾ?