Publish Date: Sun, 20 Sep 2020 (10:45 IST)
Updated Date: Sun, 20 Sep 2020 (10:47 IST)
ಜೈಪುರ: 45 ವರ್ಷದ ಮಹಿಳೆ ಹಾಗೂ ಆಕೆಯ ಸಂಬಂಧಿಗೆ ಬೆದರಿಕೆ ಹಾಕಿ ಕಾಮುಕರ ಗುಂಪೊಂದು ಮಾನಭಂಗ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಮಹಿಳೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಮೂವರನ್ನು ಬಂಧಿಸಲಾಗಿದೆ. ಮಹಿಳೆ ಹಾಗೂ ಆಕೆಯ ಅಳಿಯನಿಗೆ ಆಯುಧ ತೋರಿಸಿ ಬೆದರಿಸಿ ಕಾಮುಕರು ಈ ಕೃತ್ಯವೆಸಗಿದ್ದಾರೆ. ಸಂಬಂಧಿಕರ ಮನೆಗೆ ಹೋಗಿ ಮಹಿಳೆ ಮನೆಗೆ ಮರಳುವಾಗ ದುರುಳರು ಈ ಕೃತ್ಯವೆಸಗಿದ್ದಾರೆ.