Publish Date: Sat, 19 Sep 2020 (10:07 IST)
Updated Date: Sat, 19 Sep 2020 (10:08 IST)
ಅಹಮ್ಮದಾಬಾದ್: ಕುಡುಕ ಗಂಡನ ಕಿರುಕುಳದ ಬಗ್ಗೆ ಅನೇಕ ಸುದ್ದಿ ಕೇಳಿರುತ್ತೀರಿ. ಇದೀಗ ಗಂಡನೇ ಕುಡುಕ ಹೆಂಡತಿಯ ಸಹವಾಸದಿಂದ ಬೇಸತ್ತು ಪೊಲೀಸರ ಮೊರೆ ಹೋದ ಘಟನೆ ನಡೆದಿದೆ.
ತನ್ನ ಪತ್ನಿ ಮದ್ಯವ್ಯಸನಿ. ಕುಡಿದ ಮತ್ತಿನಲ್ಲಿ ತನ್ನ ಮೇಲೆ ಹಲ್ಲೆ ಮಾಡುವುದು, ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತನ್ನ ಮೇಲೆ ಕಿರುಕುಳ ಆರೋಪ ಮಾಡುವುದು ಇತ್ಯಾದಿ ಮಾಡಿ ಕಾಟ ನೀಡುತ್ತಿದ್ದಾಳೆ ಎಂದು ಪತಿರಾಯ ಪೊಲೀಸರಿಗೆ ದೂರು ನೀಡಿದ್ದಾನೆ. ನನಗೆ ಪತ್ನಿಯಿಂದ ರಕ್ಷಣೆ ನೀಡಿ ಎಂದೂ ಪತಿ ಮನವಿ ಮಾಡಿದ್ದಾನೆ. ಮದುವೆಗೆ ಮೊದಲು ಆಕೆ ಮದ್ಯವ್ಯಸನಿ ಎಂದು ಗೊತ್ತಿರಲಿಲ್ಲ. ಈಗ ಟಾರ್ಚರ್ ತಾಳಲಾಗುತ್ತಿಲ್ಲ ಎಂದು ಗಂಡ ದೂರಿದ್ದಾನೆ.