Publish Date: Wed, 16 Sep 2020 (16:49 IST)
Updated Date: Wed, 16 Sep 2020 (16:51 IST)
ಪಠಾಣ್ ಕೋಟ್: ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಸ್ಥರ ಹತ್ಯೆ ಪ್ರಕರಣವನ್ನು ಪಂಜಾಬ್ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು ಮೂವರನ್ನು ಬಂಧಿಸಲಾಗಿದೆ.
ಡಕಾಯಿತರ ಗುಂಪಿನ ಮೂವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿದ್ದು, ಅಪರಾಧಿಗಳನ್ನು ಹಿಡಿದು ಕಾನೂನಿಗೆ ಕೈಗೊಪ್ಪಿಸಿದ ಪೊಲೀಸರಿಗೆ ಮತ್ತು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಗೆ ಸುರೇಶ್ ರೈನಾ ಧನ್ಯವಾದ ಸಲ್ಲಿಸಿದ್ದಾರೆ. ಆಗಸ್ಟ್ 31 ರಂದು ರೈನಾ ಸಹೋದರ ಸಂಬಂಧಿಗಳ ಮನೆಯಲ್ಲಿ ನಡೆದ ದಾಳಿಯಲ್ಲಿ ಮಾವ, ಅವರ ಮಗ ಸಾವನ್ನಪ್ಪಿದ್ದರೆ, ಅತ್ತೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ನೇಮಿಸಲಾಗಿತ್ತು.