Publish Date: Tue, 15 Sep 2020 (13:08 IST)
Updated Date: Tue, 15 Sep 2020 (13:09 IST)
ಮುಂಬೈ: ತನ್ನ ನಡತೆ ಮೇಲೆ ಅನುಮಾನ ಹೊಂದಿದ್ದ ಪತಿ ಬೆಡ್ ರೂಂನಲ್ಲೇ ಸಿಸಿಟಿವಿ ಅಳವಡಿಸಿ ಇರಿಸುಮುರಿಸು ತಂದ ಪರಿಣಾಮ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ.
ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪತಿ ನಿವೃತ್ತ ಸೇನಾಧಿಕಾರಿ ಎನ್ನಲಾಗಿದೆ. ಈತ ಪತ್ನಿಯ ಮೇಲೆ ಅನುಮಾನದಿಂದ ಬೆಡ್ ರೂಂನಲ್ಲಿ ಸಿಸಿಟಿವಿ ಅಳವಡಿಸಿ ಆಕೆಯ ಚಲನವಲನಗಳ ಮೇಲೆ ನಿಗಾ ವಹಿಸಿದ್ದ. ಇದರಿಂದಾಗಿ ಪತ್ನಿ ಮತ್ತು ಮಗಳಿಗೆ ಇರಿಸುಮುರಿಸಾಗಿತ್ತು. ಹೀಗಾಗಿ ಸಿಸಿಟಿವಿ ತೆಗೆಯುವಂತೆ ಪತಿಗೆ ಮನವಿ ಮಾಡಿದರೂ ಕಿವಿಗೊಡದ ಆತ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಲು ಹೋದಾಗ ಅವರು ದೂರು ಸ್ವೀಕರಿಸಲಿಲ್ಲ. ಹೀಗಾಗಿ ಮಹಿಳೆ ನೇರವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ನ್ಯಾಯಾಲಯ ಪತಿಗೆ ಸಿಸಿಟಿವಿ ತೆಗೆದು ಹಾಕಲು ಆದೇಶಿಸಿದ್ದಲ್ಲದೆ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಕ್ಕೆ ಪತ್ನಿ 40 ಸಾವಿರ ರೂ.ಗಳ ದಂಡ ನೀಡುವಂತೆ ಆದೇಶಿಸಿದೆ.