Publish Date: Tue, 15 Sep 2020 (10:44 IST)
Updated Date: Tue, 15 Sep 2020 (10:46 IST)
ಬೆಂಗಳೂರು: ಸೆಲೆಬ್ರಿಟಿಗಳು, ರಂಗಿನ ಲೋಕದವರು ಮತ್ತಿನಲ್ಲಿ ತೇಲಾಡುತ್ತಿದ್ದ ಪಾರ್ಟಿಗಳಿಗೆ ತಾಣವಾಗಿದ್ದ ಆದಿತ್ಯ ಆಳ್ವಾ ಅವರ ಒಡೆತನದ ರೆಸಾರ್ಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಡ್ರಗ್ ಮಾಫಿಯಾ ಪ್ರಕರಣದಲ್ಲಿ ಆದಿತ್ಯಾ ಆಳ್ವಾ ಹೆಸರೂ ಕೇಳಿಬಂದಿದೆ. ಇದರ ಬೆನ್ನಲ್ಲೇ ಸಿಸಿಬಿ ಹೆಬ್ಬಾಳದ ಬಳಿಯಿರುವ ಅವರ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದಾರೆ. ಇಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಸೆಲೆಬ್ರಿಟಿಗಳು, ಘಟಾನುಘಟಿಗಳೇ ಅತಿಥಿಗಳಾಗಿದ್ದರು. ರಾತ್ರಿಯಿಡೀ ಇಲ್ಲಿ ಪಾರ್ಟಿ ನಡೆಯುತ್ತಿತ್ತು. ಕೆಲವನ್ನು ಆದಿತ್ಯಾ ಆಳ್ವಾನೇ ಆಯೋಜಿಸುತ್ತಿದ್ದರೆ, ಇನ್ನು ಕೆಲವನ್ನು ಬೇರೆಯವರು ಆಯೋಜಿಸುತ್ತಿದ್ದರು. ಹೀಗಾಗಿ ಇಲ್ಲಿ ಮಹತ್ವದ ದಾಖಲೆಗಳು ಕೈವಶವಾಗುವ ಸಾಧ‍್ಯತೆಯಿದೆ.