Select Your Language

Notifications

webdunia
webdunia
webdunia
webdunia

ಇಂದು ಮತ್ತೆ ರಾಗಿಣಿ-ಸಂಜನಾಗೆ ವೈದ್ಯಕೀಯ ಪರೀಕ್ಷೆ: ರಾಗಿಣಿಗೆ ಇಂದು ಜಾಮೀನಿಲ್ಲ

ಇಂದು ಮತ್ತೆ ರಾಗಿಣಿ-ಸಂಜನಾಗೆ ವೈದ್ಯಕೀಯ ಪರೀಕ್ಷೆ: ರಾಗಿಣಿಗೆ ಇಂದು ಜಾಮೀನಿಲ್ಲ
ಬೆಂಗಳೂರು , ಸೋಮವಾರ, 14 ಸೆಪ್ಟಂಬರ್ 2020 (12:05 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ, ಸಂಜನಾರನ್ನು ಇಂದು ಸಿಸಿಬಿ ಪೊಲೀಸರು ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾರೆ.


ಕೋರ್ಟ್ ಗೆ ಹಾಜರಾಗುವ ಮುನ್ನ ಸಾಮಾನ್ಯ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಮಹಿಳಾ ಸಾಂತ್ವನ ಕೇಂದ್ರಕ್ಕೆ ಆಗಮಿಸಿದ ಸಿಸಿಬಿ ಪೊಲೀಸರ ತಂಡ ಪೊಲೀಸ್ ವಾಹನದಲ್ಲಿ ನಟಿಮಣಿಯರನ್ನು ಸಾಮಾನ್ಯ ವೈದ್ಯಕೀಯ ಪರೀಕ್ಷೆ ನಡೆಸಲು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರ ಜತೆಗೆ ಇತರ ಆರೋಪಿಗಳಾದ ರವಿಶಂಕರ್, ರಾಹುಲ್, ಲೂಮ್ ಪೆಪ್ಪರ್, ವೀರೇನ್ ಖನ್ನಾಗೂ ವೈದ್ಯಕೀಯ ಪರೀಕ್ಷೆ ನಡೆಸಲು ಕರೆದೊಯ್ಯಲಾಗುತ್ತಿದೆ.

ಇನ್ನು, ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 16 ಕ್ಕೆ ಮುಂದೂಡಲಾಗಿದೆ. ಹೀಗಾಗಿ ಇಂದು ಅವರಿಗೆ ಕೋರ್ಟಿನಲ್ಲಿ ಜಾಮೀನು ಸಿಗಲ್ಲ. ಹೀಗಾಗಿ ಸಿಸಿಬಿ ಕಸ್ಟಡಿಯೋ, ಪರಪ್ಪನ ಅಗ್ರಹಾರವೋ ಎಂಬುದು ತೀರ್ಮಾನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಪೆಡ್ಲರ್ ರಾಹುಲ್ 15 ವರ್ಷಗಳಿಂದ ಪರಿಚಯ: ಕೆ. ಮಂಜು