Publish Date: Mon, 14 Sep 2020 (11:19 IST)
Updated Date: Mon, 14 Sep 2020 (11:21 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಮತ್ತು ರಾಗಿಣಿ ವಿಚಾರಣೆ ವೇಳೆ ಸಿಸಿಬಿ ಪೊಲೀಸರ ಮುಂದೆ ಪಾರ್ಟಿಗಳಿಗೆ ಹೋಗುತ್ತಿದ್ದುದು ನಿಜ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ವೀರೇನ್ ಖನ್ನಾ, ರಾಹುಲ್ ಪಾರ್ಟಿಗಳಿಗೆ ಹೋಗುತ್ತಿದ್ದುದು ನಿಜ. ಪಾರ್ಟಿಗಳಿಗೆ ಸೆಲೆಬ್ರಿಟಿಗಳೂ ಬರುತ್ತಿದ್ದರು. ಅದೇ ರೀತಿ ನಾವೂ ಹೋಗುತ್ತಿದ್ದೆವು. ಆದರೆ ಪಾರ್ಟಿಗಳಲ್ಲಿ ಡ್ರಗ್ಸ್ ಇರುತ್ತೆ ಎಂಬ ವಿಚಾರ ನಮಗೆ ಗೊತ್ತಿಲ್ಲ. ನಾವು ಸೇವಿಸಿಲ್ಲ ಎಂದು ಇಬ್ಬರೂ ಒಂದೇ ಉತ್ತರ ನೀಡಿ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೇರೆಯವರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸಿಲ್ಲ ಎನ್ನಲಾಗಿದೆ.