Publish Date: Mon, 14 Sep 2020 (11:04 IST)
Updated Date: Mon, 14 Sep 2020 (11:05 IST)
ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ಹಿಂದಿ ಹೇರಿಕೆ ವಿರುದ್ಧ ಧ್ವನಿಯೆತ್ತಿದ್ದು, ನನ್ನ ಮಾತೃಭಾಷೆ ನನ್ನ ಹೆಮ್ಮೆ ಎಂದಿದ್ದಾರೆ.
ಪ್ರಾದೇಶಿಕ ಭಾಷೆ ಪರ ಅನೇಕ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ಅವರಿಗೆ ಪ್ರಕಾಶ್ ರೈ ಕೂಡಾ ಸಾಥ್ ಕೊಟ್ಟಿದ್ದಾರೆ. ಹಲವು ಭಾಷೆಗಳಲ್ಲಿ ಮಾತಾಡಬಲ್ಲೆ, ಕೆಲಸ ಮಾಡಬಲ್ಲೆ. ಆದರೆ ನನ್ನ ಬೇರು, ಗ್ರಹಿಕೆ, ಹೆಮ್ಮೆ, ನನ್ನ ಮಾತೃಭಾಷೆ ಕನ್ನಡ. ಹಿಂದಿ ಹೇರಿಕೆ ಬೇಡಡ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.