Publish Date: Mon, 14 Sep 2020 (10:24 IST)
Updated Date: Mon, 14 Sep 2020 (10:25 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿನ್ನೆ ಸಂಜೆ ವಿಡಿಯೋ ಸಂದೇಶ ಮೂಲಕ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಹಾಗೇ ಇನ್ನೊಂದು ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ.
ಗುಡ್ ನ್ಯೂಸ್ ಎಂದರೆ ಉಪೇಂದ್ರ ಸದ್ಯದಲ್ಲೇ ನಿರ್ದೇಶನಕ್ಕೆ ಮರಳಲಿದ್ದಾರಂತೆ. ರಿಯಲ್ ಸ್ಟಾರ್ ಮತ್ತೆ ನಿರ್ದೇಶನಕ್ಕೆ ಬರಬೇಕೆಂದು ಎಷ್ಟೋ ಜನ ಆಶಿಸುತ್ತಿದ್ದರು. ಅಭಿಮಾನಿಗಳ ಕೋರಿಕೆಯಂತೆ ಉಪೇಂದ್ರ ಕತೆಯೊಂದನ್ನು ರೆಡಿ ಮಾಡುತ್ತಿದ್ದು, ಸದ್ಯದಲ್ಲೇ ಟೈಟಲ್ ಜತೆಗೆ ತಾವು ನಿರ್ದೇಶನ ಮಾಡಲಿರುವ ಸಿನಿಮಾ ಬಗ್ಗೆ ಹೊಸ ಸುದ್ದಿ ಕೊಡಲಿದ್ದಾರಂತೆ.
ಬ್ಯಾಡ್ ನ್ಯೂಸ್ ಏನಪ್ಪಾ ಎಂದರೆ ಉಪೇಂದ್ರ ಬರ್ತ್ ಡೇ ಇದೇ ಸೆಪ್ಟೆಂಬರ್ 18 ರಂದು ಇದ್ದು, ಈ ವರ್ಷ ಕೊರೋನಾ ಕಾರಣದಿಂದ ಅಭಿಮಾನಿಗಳ ಜತೆ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲವಂತೆ. ಆ ದಿನ ತಾವು ಮನೆಯಲ್ಲೇ ಇರಲ್ಲ. ನಾಲ್ಕೈದು ದಿನಗಳ ಮಟ್ಟಿಗೆ ಹೊರಗಡೆ ಹೋಗುತ್ತಿದ್ದೇನೆ, ಸಾಧ್ಯವಾದರೆ ನೆಟ್ ವರ್ಕ್ ಇದ್ದರೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬರುತ್ತೇನೆ. ಇಲ್ಲವಾದರೆ ನನ್ನ ಅಲಭ್ಯತೆಗೆ ಕ್ಷಮೆಯಿರಲಿ ಎಂದು ಉಪೇಂದ್ರ ಕೇಳಿಕೊಂಡಿದ್ದಾರೆ.