Publish Date: Mon, 14 Sep 2020 (11:55 IST)
Updated Date: Mon, 14 Sep 2020 (11:58 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತನಾಗಿರುವ ರಾಹುಲ್ ನನಗೆ 15 ವರ್ಷಗಳಿಂದ ಪರಿಚಯ ಎಂದು ನಿರ್ಮಾಪಕ ಕೆ. ಮಂಜು ಹೇಳಿದ್ದಾರೆ.
ಪ್ರಶಾಂತ್ ಸಂಬರಗಿ ತಮಗೆ ರಾಹುಲ್ ಜತೆ ಸಂಬಂಧವಿದೆ ಎಂದು ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದ ಮಂಜು ನನಗೆ ರಾಹುಲ್ 15 ವರ್ಷಗಳಿಂದಲೂ ಪರಿಚಯ. ಆದರೆ ಅವನ ವ್ಯವಹಾರಗಳೆಲ್ಲಾ ನನಗೆ ಗೊತ್ತಿಲ್ಲ. ಒಂದು ವೇಳೆ ಕಾನೂನು ಬಾಹಿರ ಕೆಲಸ ಮಾಡಿದ್ದರೆ ಅದು ತಪ್ಪು. ಸಿನಿಮಾ ಮಾಡಬೇಕು ಅವಕಾಶ ಕೊಡಿಸಿ ಎಂದು ನನಗೆ ಕೇಳಿದ್ದ. ಕಾರ್ಯಕ್ರಮವೊಂದರಲ್ಲಿ ಜತೆಗೇ ಊಟ ಮಾಡಿದ್ದೆವು. ಅದು ತಪ್ಪಾ ಎಂದು ಮಂಜು ಪ್ರಶ್ನಿಸಿದ್ದಾರೆ.