ಹೈದರಾಬಾದ್ : ಬಹು ಬಜೆಟ್ ಚಿತ್ರ ‘ಆದಿಪುರುಷ’ ಸಿನಿಮಾದಲ್ಲಿ ನಟ ಪ್ರಭಾಸ್ ಅಭಿನಯಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ಸಿನಿಮಾದಲ್ಲಿ ನಟ ಪ್ರಭಾಸ್ ಅವರನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಏನೆಂಬುದನ್ನು ಚಿತ್ರತಂಡ ತಿಳಿಸಿದೆ.
ಹೌದು. ಆದಿಪುರುಷ ಸಿನಿಮಾ ಒಂದು ಪೌರಾಣಿಕ ಸಿನಿಮಾವಾಗಿದೆ. ಬಾಹುಬಲಿಯಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿ ಜನರ ಮನಗೆದ್ದ ನಟ ಪ್ರಭಾಸ್ ಅವರನ್ನು ಆದಿಪುರುಷ ಸಿನಿಮಾದಲ್ಲಿ ನಾಯಕನಾಗಿ ನಿರ್ದೇಶಕ ಓಂ ರಾವತ್ ಆಯ್ಕೆ ಮಾಡಿದ್ದಾರೆ. ಆದರೆ ಇದಕ್ಕೆ ಕಾರಣವೇನೆಂಬುದನ್ನು ಇದೀಗ ಅವರು ರಿವಿಲ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ರಾವತ್, ಪ್ರಭಾಸ್ ಅವರ ತೀಕ್ಷ್ಣವಾದ ಕಣ್ಣು ನೋಡಿ ಆದಿಪುರುಷ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಭಾಸ್ ಅವರ ಬಾಡಿ ಲಾಂಗ್ವೇಜ್ ಈ ಪಾತ್ರಕ್ಕೆ ಹೊಂದಿಕೆಯಾಗುತ್ತದೆ. ಆ ಕಾರಣಕ್ಕೆ ಪ್ರಭಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.