Publish Date: Tue, 15 Sep 2020 (09:22 IST)
Updated Date: Tue, 15 Sep 2020 (09:23 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಭಾವಿಗಳೇ ಈ ಮಾದಕ ಜಾಲದಲ್ಲಿರುವುದು ಬಯಲಾಗುತ್ತಿದೆ.
ಇದೀಗ ಸಿಸಿಬಿ ಪೊಲೀಸರು ಶೇಕ್ ಫಾಝಿಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈತ ಕ್ಯಾಸಿನೋಗಳಲ್ಲಿ ಹಣ ಹೂಡಿಕೆ ಸೇರಿದಂತೆ ಪ್ರಮುಖರ ಜತೆ ಒಡನಾಟವಿಟ್ಟುಕೊಂಡಿದ್ದ ವ್ಯಕ್ತಿ. ಈತ ಸಿಕ್ಕಿಬಿದ್ದರೆ ಸಂಜನಾ ಗಲ್ರಾನಿ ವ್ಯವಹಾರ ಮತ್ತು ಶಾಸಕ ಜಮೀರ್ ಅಹಮ್ಮದ್ ಅವರ ವ್ಯವಹಾರಗಳೂ ಹೊರಬೀಳಲಿವೆ ಎನ್ನಲಾಗಿದೆ. ಶಾಸಕ ಜಮೀರ್ ಸೇರಿದಂತೆ ಪ್ರಭಾವಿಗಳ ಜತೆ ಗುರುತಿಸಿಕೊಂಡಿದ್ದ ಫಾಝಿಲ್ ಇದುವರೆಗೆ ಪೊಲೀಸರ ಕೈಗೆ ಸಿಕ್ಕಿಲ್ಲ. ಈತನ ಬಗ್ಗೆ ಹುಡುಕಾಟ ನಡೆಸಲಾಗುತ್ತಿದೆ.