Publish Date: Wed, 16 Sep 2020 (11:13 IST)
Updated Date: Wed, 16 Sep 2020 (11:14 IST)
ದುಬೈ: ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅರ್ಜುನ್ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರು ಸ್ವಿಮ್ಮಿಂಗ್ ಪೂಲ್ ನಲ್ಲಿ ಎಂಜಾಯ್ ಮಾಡುತ್ತಿರುವಾಗ ಅವರ ಜತೆ ಅರ್ಜುನ್ ಕೂಡಾ ಕಾಣಿಸಿಕೊಂಡಿದ್ದು ಅವರೂ ತಂಡದ ಭಾಗವಾಗಲಿದ್ದಾರೆಯೇ ಎಂಬ ಅನುಮಾನ ಅಭಿಮಾನಿಗಳದ್ದು. ಆದರೆ ಅವರು ಮುಂಬೈ ತಂಡದ ಭಾಗವಾಗಿಲ್ಲ. ಆದರೆ ಮುಂಬೈ ತಂಡದ ಜತೆಗೆ ಪ್ರಯಾಣಿಸಿರುವ ಅರ್ಜುನ್ ನೆಟ್ ಬೌಲರ್ ಆಗಿದ್ದಾರೆ.