ದುಬೈ: ಐಪಿಎಲ್ 13 ಆರಂಭವಾಗಲು ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೂ ಮೊದಲು ಬಿಸಿಸಿಐ ಅಧ್ಯಕ್ಷ ಯುಎಇಯ ಶಾರ್ಜಾ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಬಿಸಿಸಿಐ ಅಧ್ಯಕ್ಷ ಬ್ರಿಜೇಶ‍್ ಪಟೇಲ್, ರಾಜೀವ್ ಶುಕ್ಲಾ ಜತೆಗೆ ಶಾರ್ಜಾ ಮೈದಾನಕ್ಕೆ ಭೇಟಿ ನೀಡಿದ ಗಂಗೂಲಿ ಸಿದ್ಧತೆಗಳ ಪರಿಶೀಲನ ನಡೆಸಿದ್ದಾರೆ. ಶಾರ್ಜಾ ಮೈದಾನ ಐಪಿಎಲ್ 13 ಕ್ಕೆ ಸಂಪೂರ್ಣ ಸಜ್ಜಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಸ್ವಚ್ಛತೆ, ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ಕ್ರಮಗಳೊಂದಿಗೆ ಐಪಿಎಲ್ ಆಯೋಜಿಸಲಾಗುತ್ತಿದೆ.