Publish Date: Sun, 13 Sep 2020 (10:00 IST)
Updated Date: Sun, 13 Sep 2020 (10:01 IST)
ದುಬೈ: ಐಪಿಎಲ್ 13 ಗೆ ತಯಾರಿ ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಒಂದೇ ಕೈಯಿಂದ ಕ್ಯಾಚ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೋಹಿತ್ ಮೊನ್ನೆಯಷ್ಟೇ ಬ್ಯಾಟಿಂಗ್ ಅಭ್ಯಾಸದ ವೇಳೆ ಭರ್ಜರಿ ಸಿಕ್ಸರ್ ಸಿಡಿಸಿದ್ದು, ಮೈದಾನದಿಂದ ಹೊರಗೆ ಹೋಗಿ ಬಸ್ ಒಂದಕ್ಕೆ ಬಿದ್ದು ಸುದ್ದಿಯಾಗಿತ್ತು. ಇದೀಗ ಒಂದೇ ಕೈಯಿಂದ ಹಾರಿ ಕ್ಯಾಚ್ ಹಿಡಿದು ಫೀಲ್ಡಿಂಗ್ ನಲ್ಲೂ ತಾವು ಸೈ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಹಳ ದಿನಗಳ ನಂತರ ಕ್ರಿಕೆಟ್ ಆಡಲಿಳಿದರೂ ರೋಹಿತ್ ಅದೇ ಫಾರ್ಮ್ ಉಳಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸವುಂಟು ಮಾಡಿದೆ.