Publish Date: Sun, 20 Sep 2020 (10:38 IST)
Updated Date: Sun, 20 Sep 2020 (10:40 IST)
ನವದೆಹಲಿ: ಲಾಕ್ ಡೌನ್ ನಿಂದಾಗಿ ಎಷ್ಟೋ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ವ್ಯಕ್ತಿಯೊಬ್ಬ ಹಣಕಾಸಿನ ಮುಗ್ಗಟ್ಟಿನಿಂದಾಗಿ ಸ್ವಂತ ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಮಕ್ಕಳು ಬೀದಿಯಲ್ಲಿ ತೆವಳಾಡಿಕೊಂಡಿರುವುದನ್ನು ಕಂಡ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಳಿಕ ಪೊಲೀಸರ ನೆರವಿನಿಂದ ಮಕ್ಕಳನ್ನು ಪೋಷಕರಿಗೇ ಮರಳಿಸಲಾಗಿದೆ. ವಿಚಾರಣೆ ವೇಳೆ ನನಗೆ ನನ್ನ ಕಂಪನಿ ಹಲವು ಬಾರಿ ಅಲೆದಾಡಿದರೂ ವೇತನ ನೀಡಿಲ್ಲ. ಇದರಿಂದಾಗಿ ಮಕ್ಕಳಿಗೆ ಹಾಲು ತಂದುಕೊಡಲೂ ದುಡ್ಡಿಲ್ಲ. ಅದಕ್ಕಾಗಿ ನನ್ನ ಮಾಲಿಕನ ಮನೆಯ ಹೊರಗೆ ಮಕ್ಕಳನ್ನು ಬಿಟ್ಟೆ. ಆದರೆ ಅವರು ಬೀದಿಗೆ ಬಂದಿದ್ದು ಹೇಗೆ ಗೊತ್ತಿಲ್ಲ ಎಂದಿದ್ದಾನೆ.