Select Your Language

Notifications

webdunia
webdunia
webdunia
webdunia

ಗಂಡು ಮಗುವಿನ ಮೇಲಿನ ಆಸೆಗೆ ಹುಟ್ಟಿದ ಹೆಣ್ಣುಮಗುವಿಗೆ ತಾಯಿ ಮಾಡಿದ್ದೇನು ಗೊತ್ತಾ?

ಗಂಡು ಮಗುವಿನ ಮೇಲಿನ ಆಸೆಗೆ ಹುಟ್ಟಿದ ಹೆಣ್ಣುಮಗುವಿಗೆ ತಾಯಿ ಮಾಡಿದ್ದೇನು ಗೊತ್ತಾ?
ಭೋಪಾಲ್ , ಭಾನುವಾರ, 20 ಸೆಪ್ಟಂಬರ್ 2020 (11:52 IST)
ಭೋಪಾಲ್ : ಗಂಡು ಮಗುವಿನ ವ್ಯಾಮೋಹದಿಂದಾಗಿ ಹುಟ್ಟಿದ ಹೆಣ್ಣು ಮಗುವನ್ನು ಹೆತ್ತ ತಾಯಿಯೆ ಕೊಂದ ಘಟನೆ ಭೋಪಾಲ್ ಜಿಲ್ಲೆಯ ಖಜುರಿ ಗ್ರಾಮದಲ್ಲಿ ನಡೆದಿದೆ.

ಸರಿತಾ(25) ಇಂತಹ ನೀಚ ಕೃತ್ಯ ಎಸಗಿದ ನೀಚ ತಾಯಿ. ಈಕೆ 1 ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಇವಳಿಗೆ ಗಂಡು ಮಗು ಬೇಕೆಂಬ ಹಂಬಲವಿತ್ತು ಆದಕಾರಣ ಮಗುವನ್ನು ತುಂಬಾ ತಾತ್ಸಾರ ಮಾಡುತ್ತಿದ್ದಳಂತೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವನ್ನು ನೀರಿನ ಡ್ರಮ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.

ಬಳಿಕ ಮನೆಯವರ ಬಳಿ ಮಗು ಕಾಣುತ್ತಿಲ್ಲ ಎಂದು ಸುಳ್ಳು ಹೇಳಿದ್ದಾಳೆ. ಎಲ್ಲಾ ಕಡೆ ಹುಡುಕಾಡಿದ ಮನೆಯವರಿಗೆ ಮಗು ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದ್ದಾಗ ಮಗುವಿನ ಶವ ನೀರಿನ ಡ್ರಮ್ ನಲ್ಲಿ ಪತ್ತೆಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ತಾಯಿಯ ಮೇಲೆ ಅನುಮಾನಗೊಂಡ ಪೋಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗೆ ಕರೆದವ ಅಪ್ರಾಪ್ತೆಗೆ ಮಾಡಿದ್ದೇನು ಗೊತ್ತಾ?