ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮತಾಂತರ ಆಗಿದ್ದಾರೆ ಎಂದು ಹೋರಾಟಗಾರ ಹಾಗೂ ಚಿತ್ರ ವಿತರಕ ಪ್ರಶಾಂತ ಸಂಬರಗಿ ಆರೋಪ ಮಾಡಿದ್ದರು.
ಇದರ ಬೆನ್ನಲ್ಲೇ ನಟಿ ಸಂಜನಾ ಕುರಿತು ಒಂದೊಂದೇ ಸೀಕ್ರೇಟ್ ಗಳು ಹೊರಬರಲಾರಂಭಿಸಿವೆ.
ನಟಿ ಸಂಜನಾ ಗಲ್ರಾನಿ 2018 ರಲ್ಲೇ ಸ್ವ ಇಚ್ಛೆಯಿಂದ ಬಂದು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ ಎಂದು ಧರ್ಮಗುರು ಮಹ್ಮದ್ ಜುಲಾಲುದ್ದೀನ್ ಹೇಳಿದ್ದಾರೆ ಎನ್ನಲಾಗಿದೆ.
ಇಸ್ಲಾಂ ಆದರ್ಶಗಳನ್ನು ಒಪ್ಪಿಕೊಂಡು ಅಫಿಡೆವಿಟ್ ಜೊತೆಗೆ ಬಂದು ವಿಧಿ ವಿಧಾನದಂತೆ ಮತಾಂತರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.