Publish Date: Tue, 15 Sep 2020 (13:35 IST)
Updated Date: Tue, 15 Sep 2020 (13:36 IST)
ಜೈಪುರ : ಅನೈತಿಕ ಸಂಬಂಧಕ್ಕಾಗಿ ಪತ್ನಿ ತನ್ನನ್ನು ಕೊಲೆ ಮಾಡುತ್ತಾಳೆ ಎಂದು ಪತಿಯೊಬ್ಬ ಪತ್ನಿ ಹಾಗೂ ಆಕೆಯ ತಾಯಿಯನ್ನು ಕೊಲೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಮಂಜು ಸೈನಿ ಮತ್ತು ಗೌರ ದೇವಿ ಕೊಲೆಯಾದ ತಾಯಿ, ಮಗಳು. ರಾಮ್ ಕಿಶನ್ ಸೈನಿ ಕೊಲೆ ಮಾಡಿದ ಪತಿ. ಮಂಜು ಸೈನಿ ಮತ್ತು ರಾಮ್ ಕಿಶನ್ ಸೈನಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ಪತ್ನಿ ಪರಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಅದಕ್ಕೆ ಆಕೆಯ ತಾಯಿ ಬೆಂಬಲ ನೀಡಿದ್ದಾಳೆ ಎಂದು ತಿಳಿದು ರಾತ್ರಿ ಮಲಗಿದ್ದಾಗ ಇಬ್ಬರ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಬಳಿಕ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರಿಬ್ಬರು ಸೇರಿ ತನ್ನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ರು ಅದಕ್ಕೂ ಮೊದಲೇ ನಾನೇ ಅವರನ್ನು ಕೊಂದೆ ಎಂದು ತಿಳಿಸಿದ್ದಾನೆ.