ಚೆನ್ನೈ: ಆನ್ ಲೈನ್ ಜೂಜಿನಿಂದಾಗಿ ಎಷ್ಟೋ ಯುವಕರು ಹಾದಿ ತಪ್ಪುತ್ತಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಸುದ್ದಿ ಬಂದಿದೆ.
ಕನ್ಯಾಕುಮಾರಿಯಲ್ಲಿ ವ್ಯಕ್ತಿಯೊಬ್ಬ ಆನ್ ಲೈನ್ ಜೂಜಾಟ ರಮ್ಮಿ ಸರ್ಕಲ್ ಗೆ ದಾಸನಾಗಿ ಅದಕ್ಕೆ ಹಣ ಹೊಂದಿಸಲು ಚೈನು ಕದಿಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ. ವಿದ್ಯಾರ್ಥಿಯಾಗಿದ್ದ ಈತ ತನ್ನ ಚಟ ತೀರಿಸಿಕೊಳ್ಳಲು ಚೈನು ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದ. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದು, ಕಂಬಿ ಎಣಿಸುತ್ತಿದ್ದಾನೆ.