Publish Date: Sun, 14 Feb 2021 (09:54 IST)
Updated Date: Sun, 14 Feb 2021 (09:56 IST)
ಗಾಝಿಯಾಬಾದ್: ಭಾವೀ ಪತಿಯ ಸಹಾಯ ಪಡೆದು ಮಹಿಳೆಯೊಬ್ಬಳು ಮಾಜಿ ಬಾಯ್ ಫ್ರೆಂಡ್ ನ ಹತ್ಯೆ ಮಾಡಿದ್ದಾಳೆ. ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
26 ವರ್ಷದ ಯುವಕ ಹತ್ಯೆಗೀಡಾದವ. ಈತ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಲೇ ಇದ್ದ. ಆದರೆ ಮಹಿಳೆಗೆ ಆಗಲೇ ಬೇರೊಬ್ಬನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಭಾವೀ ಪತಿಯ ಮನವೊಲಿಸಿ ಹಳೇ ಬಾಯ್ ಫ್ರೆಂಡ್ ಪಾರ್ಟಿ ಮಾಡುವ ನೆಪದಲ್ಲಿ ಕರೆಸಿ ಕಂಠ ಪೂರ್ತಿ ಮದ್ಯ ಕುಡಿಸಿ ಹತ್ಯೆ ಮಾಡಿದ್ದಾಳೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.