Publish Date: Fri, 29 Apr 2022 (10:40 IST)
Updated Date: Fri, 29 Apr 2022 (09:34 IST)
ಪಾಟ್ನಾ: ಪತ್ನಿ ಮತ್ತು ಮಗಳಿಗೆ ಗುಂಡಿಕ್ಕಿ ಕೊಂದ ಪತಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾನೆ.
ಆರೋಪಿ ತನ್ನ ಮೊದಲ ಪತ್ನಿ ಸಾವಿನ ಬಳಿಕ ನಾದಿನಿಯನ್ನೇ ಮದುವೆಯಾಗಿದ್ದ. ಆಕೆಯಿಂದ ಓರ್ವ ಮಗಳೂ ಇದ್ದಳು. ಆದರೆ ಇದೀಗ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು.
ಆದರೆ ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪವಿತ್ತು. ಇದೇ ಕಾರಣಕ್ಕೆ ಪತಿ ಇಬ್ಬರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.