Select Your Language

Notifications

webdunia
webdunia
webdunia
webdunia

ಮತ್ತೆ ಹೆಚ್ಚಿದ ಕೋವಿಡ್ ಆತಂಕ..!

ಮತ್ತೆ ಹೆಚ್ಚಿದ ಕೋವಿಡ್ ಆತಂಕ..!
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2022 (09:26 IST)
ನವದೆಹಲಿ :  ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ದಾಖಲಾಗಿದ್ದು,
 
ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 3,303 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 46 ದಿನಗಳ ನಂತರ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 3000 ಗಡಿಯನ್ನು ದಾಟಿದೆ.

ಇದೇ ವೇಳೆಯಲ್ಲಿ 39 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕುಗಳ ಸಂಖ್ಯೆ 16,980ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.66ಕ್ಕೆ ಏರಿಕೆಯಾಗಿದ್ದು,

ವಾರದ ಪಾಸಿಟಿವಿಟಿ ದರವು ಶೇ. 0.61ರಷ್ಟಿದೆ. ಕೋವಿಡ್ ಚೇತರಿಕೆ ದರವು ಶೇ. 98.74 ರಷ್ಟಿದೆ. ದೇಶದಲ್ಲಿ ಈವರೆಗೆ 188.40 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲವು ಜಿಲ್ಲೆಗಳಲ್ಲಿ ಇಂಧನ ದರ ಇಳಿಕೆ : ಬೆಲೆ ಎಷ್ಟಿದೆ?