Publish Date: Thu, 23 Jan 2020 (06:17 IST)
Updated Date: Thu, 23 Jan 2020 (06:25 IST)
ಹೈದರಾಬಾದ್ : ಮದುವೆಯಾಗುತ್ತಿಲ್ಲವೆಂದು ಗೂಗಲ್ ಸರ್ಚ್ ಮಾಡಿ ಯುವತಿಯೊಬ್ಬಳು 5 ಲಕ್ಷ ರೂ ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಇನ್ನೂ ಮದುವೆಯಾಗದ ಯುವತಿಯೊಬ್ಬಳಿಗೆ ಮದುವೆಯ ಸಂಬಂಧಗಳೇ ಬರದದಿದ್ದಕ್ಕೆ ಆಕೆಯ ಮೇಲೆ ವಾಮಾಚಾರ ಪ್ರಯೋಗವಾಗಿದೆ, ಅದನ್ನು ತೆಗೆಸಬೇಕೆಂದು ಸಂಬಂಧಿಯೊಬ್ಬರು ಹೇಳಿದ್ದಾರೆ. ಇದನ್ನು ಕೇಳಿದ ಯುವತಿ ಗೂಗಲ್ ಸರ್ಚ್ ಮಾಡಿ ವಾಮಾಚಾರ ತೆಗೆದುಹಾಕುವ ವ್ಯಕ್ತಿಯೊಬ್ಬನ ಮಾಹಿತಿ ಕಲೆಹಾಕಿ ಆತನಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾಳೆ.
ಇದನ್ನೇ ಬಂಡವಾಗಿಸಿಕೊಂಡ ಆತ ವಿಶೇಷ ಪೂಜೆ ಮಾಡಿಸಬೇಕೆಂದು ಆಕೆಯ ಬಳಿ ತನ್ನ ಬ್ಯಾಂಕ್ ಅಕೌಂಟ್ ಗೆ 5 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಈ ಸಮಸ್ಯೆ ಸರಿಹೋಗದಕ್ಕೆ ಆಕೆ ಮತ್ತೆ ಕರೆ ಮಾಡಿದಾಗ ಮತ್ತಷ್ಟು ಹಣ ನೀಡುವಂತೆ ಹೇಳಿದ್ದಾನೆ. ಆಗ ಯುವತಿ ತಾನು ಮೋಸ ಹೋಗಿರುವುದನ್ನು ತಿಳಿದು ಹೈದರಾಬಾದ್ ನ ಸಿಟಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.