ನವವಿವಾಹಿತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು

ಸೋಮವಾರ, 20 ಜನವರಿ 2020 (11:03 IST)
ಲಕ್ನೋ : ಮದುವೆಯಾದ ನವವಿವಾಹಿತೆಯನ್ನು ಇಬ್ಬರು ಕಾಮುಕರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ನಡೆದಿದೆ.ಜನವರಿ 17ರಂದು ಮದುವೆಯಾದ ನವವಿವಾಹಿತೆಯನ್ನು ಆಕೆಯ ಪತಿಯ ಮನೆಯಿಂದ ಅಪಹರಿಸಿದ ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.


ಮಹಿಳೆ ನಾಪತ್ತೆಯಾದ ಹಿನ್ನಲೆಯಲ್ಲಿ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಗಾಗಿ ಹುಡುಕಾಡಿದಾಗ ಆಕೆ ಹಾಪುರದ ಬ್ಯಾಂಕ್ ಬಳಿ ಪತ್ತೆಯಾಗಿದ್ದಾಳೆ. ಮಹಿಳೆ ಅಘಾತಕ್ಕೊಳಗಾಗಿದ್ದು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಎಸ್ ವೈ ಚುನಾವಣಾ ನಿವೃತ್ತಿ ವಿಚಾರದ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು?