ಬಿಎಸ್ ವೈ ಚುನಾವಣಾ ನಿವೃತ್ತಿ ವಿಚಾರದ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು?

ಸೋಮವಾರ, 20 ಜನವರಿ 2020 (10:57 IST)
ಹಾಸನ : 3.5 ವರ್ಷದ ಬಳಿಕ ಬಿಎಸ್ ವೈ ಚುನಾವಣಾ ನಿವೃತ್ತಿ ವಿಚಾರ ಆರ್.ಎಸ್.ಎಸ್ ಮುಖಂಡ ಪ್ರಭಾಕರ್ ಭಟ್ ಹೇಳಿಕೆಗೆ ಕಾನೂನು ಸಚಿವ ಮಾಧುಸ್ವಾಮಿ ಟಾಂಗ್ ನೀಡಿದ್ದಾರೆ.ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಯಾವುದೇ ವಿಚಾರ ಬಿಎಸ್ ವೈ ನಮ್ಮ ಬಳಿ ಹೇಳಿಲ್ಲ. ಸಿಎಂ ಬಿಎಸ್ ವೈ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.


ಸಂಪುಟ ವಿಚಾರಣೆಯ ಬಗ್ಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಹೇಳುವಷ್ಟು ದೊಡ್ಡವ ನಾನಲ್ಲ. ಸಿಎಂ ವಿದೇಶ ಪ್ರವಾಸದ ಬಳಿಕ ನಿರ್ಧಾರ ಆಗಬಹುದು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದು ಶೃಂಗೇರಿಯಲ್ಲಿ ಚಂಡಿಕಾ ಯಾಗ ನಡೆಸಲಿರುವ ದೇವೇಗೌಡರ ಕುಟುಂಬ