ಇಂದು ಶೃಂಗೇರಿಯಲ್ಲಿ ಚಂಡಿಕಾ ಯಾಗ ನಡೆಸಲಿರುವ ದೇವೇಗೌಡರ ಕುಟುಂಬ

ಸೋಮವಾರ, 20 ಜನವರಿ 2020 (10:41 IST)
ಚಿಕ್ಕಮಗಳೂರು : ಮಾಜಿ ಪ್ರಧಾನಿ ದೇವೇಗೌಡರು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ಚಂಡಿಕಾ ಯಾಗ ನಡೆಸುತ್ತಿದ್ದಾರೆ.


ಈ ಹಿನ್ನಲೆಯಲ್ಲಿ ದಿನಗಳಿಂದ ದೇವೇಗೌಡರು ತಮ್ಮ ಕುಟುಂಬದವರ ಜೊತೆ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿ ವಿಶೇಷ ಪೂಜೆ ಮತ್ತು ಯಾಗಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರದಿಂದ ಶೃಂಗೇರಿಯಲ್ಲಿ ಆರಂಭವಾಗಿರುವ ಚಂಡಿಕಾ ಯಾಗದಲ್ಲಿ ಇಂದು ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

 

ಇಂದು ಶೃಂಗೇರಿಯಲ್ಲಿ ಉಳಿಯಲಿರುವ ಹೆಚ್.ಡಿ.ಕೆ  ನಾಳೆ ನಡೆಯುವ ಪೂರ್ಣಾಹುತಿಯ ಬಳಿಕ ಮಂಗಳೂರಿಗೆ ತೆರಳಿ ಸುದ್ದಿಗೋಷ್ಠಿ ನಡೆಸಿ ಬಳಿಕ ಕಲಬುರ್ಗಿಯಲ್ಲಿ ನಡೆಯಲಿರುವ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊನೆಗೂ ವಿಜಯ್ ದೇವರಕೊಂಡಗೆ ತೆರೆಯಿತು ಬಾಲಿವುಡ್ ಬಾಗಿಲು