ಕೊನೆಗೂ ವಿಜಯ್ ದೇವರಕೊಂಡಗೆ ತೆರೆಯಿತು ಬಾಲಿವುಡ್ ಬಾಗಿಲು

ಸೋಮವಾರ, 20 ಜನವರಿ 2020 (10:36 IST)
ಹೈದರಾಬಾದ್: ಗೀತ ಗೋವಿಂದಂ ಖ್ಯಾತಿಯ, ಯುವತಿಯರ ಹಾರ್ಟ್ ಥ್ರೋಬ್ ವಿಜಯ್ ದೇವರಕೊಂಡ ಈಗ ಬಾಲಿವುಡ್ ಗೆ ಕಾಲಿಡುತ್ತಿದ್ದಾರೆ.


ವಿಜಯ್ ಅಭಿನಯದ ಹೊಸ ಸಿನಿಮಾ ಮುಂಬೈಯಲ್ಲಿ ಸೆಟ್ಟೇರಿದ್ದು, ಇದು ತೆಲುಗು ಮಾತ್ರವಲ್ಲದೆ, ಹಿಂದಿ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಅಂದರೆ ಇದು ವಿಜಯ್ ಪಾಲಿಗೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ.

ಪೂರಿ ಜಗನ್ನಾಥ್ ನಿರ್ದೇಶನದ ಸಿನಿಮಾ ಇದಾಗಿದ್ದು, ಹಿಂದಿಯಲ್ಲಿ ಬಿಡುಗಡೆಗೆ ಖ್ಯಾತ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಕೈ ಜೋಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪೈಲ್ವಾನ್ ಸುದೀಪ್ ಗೆ ಅಭಿಮಾನಿಗಳಿಂದ ಭಾರೀ ಡಿಮ್ಯಾಂಡ್