Select Your Language

Notifications

webdunia
webdunia
webdunia
webdunia

ಸಂಸದ ಪ್ರತಾಪ್ ಸಿಂಹಗೆ ಥ್ಯಾಂಕ್ಸ್ ಎಂದ ನಟಿ ರಶ್ಮಿಕಾ ಮಂದಣ್ಣ

webdunia
ಗುರುವಾರ, 9 ಜನವರಿ 2020 (10:03 IST)
ಬೆಂಗಳೂರು: ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲು ಸಾಮಾಜಿಕ ಜಾಲತಾಣದಲ್ಲಿ ಕೈಗೊಂಡಿದ್ದ ಅಭಿಯಾನಕ್ಕೆ ಕೈ ಜೋಡಿಸಿದವರಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡಾ ಒಬ್ಬರು.


ಸೂಪರ್ ಸ್ಪೆಷಾಲಿಟಿ ಫಾರ್ ಕೊಡಗು ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟರ್ ನಲ್ಲಿ ಅಭಿಯಾನ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಕೊಡಗು ಸಂಸದ ಪ್ರತಾಪ್ ಸಿಂಹ ತಕ್ಷಣವೇ ಕೇಂದ್ರದ ಜತೆ ಮಾತನಾಡಿ ಬೇಕಾದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೇ ಅನುದಾನವನ್ನೂ ಮಂಜೂರು ಮಾಡಿಸಿಕೊಂಡಿದ್ದರು.

ಇದೀಗ ಆಸ್ಪತ್ರೆ ನಿರ್ಮಾಣಕ್ಕೆ ನೀಲನಕ್ಷೆ ತಯಾರಾಗಿದ್ದು, ಸದ್ಯದಲ್ಲೇ ಭೂಮಿ ಪೂಜೆ ನೆರವೇರಿಸುವುದಾಗಿ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಹೇಳಿದ್ದಾರೆ. ಅಷ್ಟೇ ಅಲ್ಲ, ಅಭಿಯಾನದಲ್ಲಿ ಪಾಲ್ಗೊಂಡ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸೇರಿದಂತೆ ಮತ್ತಿತರರಿಗೆ ಈ ವಿಚಾರವನ್ನು ಟ್ಯಾಗ್ ಮಾಡಿ ಗಮನ ಸೆಳೆದಿದ್ದಾರೆ.

ಇದಕ್ಕೆ ರಶ್ಮಿಕಾ ಪ್ರತಿಕ್ರಿಯಿಸಿದ್ದು, ತಮ್ಮ ತವರೂರಿನ ಜನರ ಕನಸು ನನಸು ಮಾಡುತ್ತಿರುವುದಕ್ಕೆ ಸಂಸದ ಪ್ರತಾಪ್ ಸಿಂಹಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಇಂಥಾ ಜಾಹೀರಾತಿಗೆ ರಾಯಭಾರಿ ಆಗಬೇಡಿ ಎಂದು ಕಿಚ್ಚ ಸುದೀಪ್ ಗೆ ಅಭಿಮಾನಿಗಳ ತಾಕೀತು!