Publish Date: Thu, 16 Jan 2020 (10:07 IST)
Updated Date: Thu, 16 Jan 2020 (10:08 IST)
ಕೇಪ್ ಟೌನ್: ದ.ಆಫ್ರಿಕಾ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಎಬಿಡಿ ವಿಲಿಯರ್ಸ್ ಮತ್ತೆ ಟಿ20 ಕ್ರಿಕೆಟ್ ಗೆ ಮರಳುವ ಸೂಚನೆ ನೀಡಿದ್ದಾರೆ.
ದಿಡೀರ್ ನಿವೃತ್ತಿ ಘೋಷಿಸಿದ್ದ ಎಬಿಡಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಉತ್ಸುಕರಾಗಿದ್ದಾರೆ ಎಂದು ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಈ ಸುದ್ದಿಗೆ ಪುಷ್ಟಿ ನೀಡಿದೆ.
ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಎಬಿಡಿ ತಂಡಕ್ಕೆ ಮರಳಲು ಆಸಕ್ತಿ ವಹಿಸಿದ್ದರು. ಆದರೆ ದ.ಆಫ್ರಿಕಾ ಟೀಂ ಮ್ಯಾನೇಜ್ ಮೆಂಟ್ ಅವರನ್ನು ಆಯ್ಕೆ ಮಾಡಲು ಮನಸ್ಸು ಮಾಡಿರಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಅದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಟಿ20 ವಿಶ್ವಕಪ್ ಗೆ ಕೆಲವೇ ಸಮಯ ಬಾಕಿಯಿದ್ದು, ಆಫ್ರಿಕಾ ತಂಡಕ್ಕೆ ಬಲ ನೀಡಲು ಎಬಿಡಿ ಮರಳುವ ನಿರೀಕ್ಷೆಯಿದೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಗೆ ಎಬಿಡಿ ತಂಡಕ್ಕೆ ಮರಳುವ ನಿರೀಕ್ಷೆಯಿದ್ದು, ಆ ಬಳಿಕ ವಿಶ್ವಕಪ್ ಆಡಬಹುದು ಎಂದು ನಿರೀಕ್ಷಿಸಲಾಗಿದೆ.