Select Your Language

Notifications

webdunia
webdunia
webdunia
webdunia

ರಿಷಬ್ ಪಂತ್ ಫಿಟ್: ವಿಕೆಟ್ ಕೀಪಿಂಗ್ ಕೆಲಸ ಕೆಎಲ್ ರಾಹುಲ್ ಕೈತಪ್ಪುತ್ತಾ?

ರಿಷಬ್ ಪಂತ್
ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನದ ವೇಳೆ ಟೀಂ ಇಂಡಿಯಾ ವಿಕೆಟ್ ಕೀಪಿಂಗ್ ಜವಾಬ್ಧಾರಿ ಕೆಎಲ್ ರಾಹುಲ್ ಪಾಲಾಗಿತ್ತು.


ಆದರೆ ಇದೀಗ ರಿಷಬ್ ಗಾಯದಿಂದ ಸುಧಾರಿಸಿಕೊಂಡಿದ್ದು ಶುಕ್ರವಾರ ನಡೆಯಲಿರುವ ಎರಡನೇ ಏಕದಿನ ಆಡಲು ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದೆ. ಹೀಗಾಗಿ ಎರಡನೇ ಪಂದ್ಯಕ್ಕೆ ರಿಷಬ್ ಮತ್ತೆ ಕೀಪಿಂಗ್ ಗೆ ಇಳಿಯುತ್ತಾರಾ ಅಥವಾ ಮತ್ತೆ ರಾಹುಲ್ ಅವರೇ ಕೀಪರ್ ಆಗಿ ಮುಂದುವರಿಯುತ್ತಾರಾ ಎನ್ನುವುದು ಸದ್ಯದ ಕುತೂಹಲ.

ರಾಹುಲ್ ಬ್ಯಾಟಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಅವರನ್ನು ತಂಡದಿಂದ ಕೈ ಬಿಡುವಂತಿಲ್ಲ. ರಿಷಬ್ ರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದರೆ ಯಾರನ್ನು ಕೈ ಬಿಡುವುದು ಎಂಬ ತಲೆನೋವು ಕೊಹ್ಲಿಗೆ ಕಾಡಲಿದೆ. ಹೀಗಾಗಿ ಫಾರ್ಮ್ ನಲ್ಲಿಲ್ಲದ ರಿಷಬ್ ಬದಲಿಗೆ ರಾಹುಲ್ ಅವರನ್ನೇ ಕೀಪರ್ ಆಗಿ ಮುಂದುವರಿಸಿದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೈಕೊಟ್ಟ ಪ್ಲ್ಯಾನ್, ಬುದ್ಧಿ ಕಲಿತ ವಿರಾಟ್ ಕೊಹ್ಲಿ