ಭಾರತ-ಆಸ್ಟ್ರೇಲಿಯಾ ಏಕದಿನ: ಟಾಸ್ ಗೆದ್ದ ಆಸೀಸ್

ಮಂಗಳವಾರ, 14 ಜನವರಿ 2020 (13:04 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.


ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಎದುರಾಗುತ್ತಿವೆ. ಆಸ್ಟ್ರೇಲಿಯಾವೂ ಕಠಿಣ ಎದುರಾಳಿಯಾಗಿರುವುದರಿಂದ ಈ ಪಂದ್ಯದಲ್ಲಿ ಪೈಪೋಟಿ ನಿರೀಕ್ಷಿಸಬಹುದು.

ಈ ಪಂದ್ಯದಲ್ಲಿ ಭಾರತದ ಪರ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಇಬ್ಬರೂ ನಿರೀಕ್ಷೆಯಂತೆಯೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಣಜಿ ಕ್ರಿಕೆಟ್: ಸೋಲಿನ ಸುಳಿಯಲ್ಲಿ ಕರ್ನಾಟಕ