ಕೆಎಲ್ ರಾಹುಲ್ ಗಾಗಿ ತ್ಯಾಗ ಮಾಡಲು ಮುಂದಾದ ವಿರಾಟ್ ಕೊಹ್ಲಿ

ಮಂಗಳವಾರ, 14 ಜನವರಿ 2020 (09:14 IST)
ಮುಂಬೈ: ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಅದ್ಭುತ ಫಾರ್ಮ್ ಪ್ರದರ್ಶಿಸಿ ಈಗ ಟೀಂ ಇಂಡಿಯಾ ಆಯ್ಕೆಗೆ ತಲೆನೋವು ತಂದಿಟ್ಟಿದ್ದಾರೆ. ಈ ತಲೆನೋವು ಬಗೆಹರಿಸಲು ನಾಯಕ ವಿರಾಟ್ ಕೊಹ್ಲಿ ತ್ಯಾಗ ಮಾಡಲು ಮುಂದಾಗಿದ್ದಾರೆ.


ರೋಹಿತ್ ಜತೆ ಇನಿಂಗ್ಸ್ ಆರಂಭಿಸಲು ಧವನ್ ಅಥವಾ ರಾಹುಲ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ. ಆದರೆ ಇದೀಗ ಇಬ್ಬರೂ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಹೀಗಾಗಿ ಇಬ್ಬರನ್ನೂ ಕೈ ಬಿಡುವಂತಿಲ್ಲ. ಇದಕ್ಕಾಗಿ ಕೊಹ್ಲಿ ತಮ್ಮ ಮೆಚ್ಚಿನ ಮೂರನೇ ಕ್ರಮಾಂಕವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ.

ಇಬ್ಬರಿಗೂ ತಂಡದಲ್ಲಿ ಸ್ಥಾನ ಕಲ್ಪಿಸಲು ನಾನು ನಾಲ್ಕನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಲು ಸಿದ್ಧ ಎಂದು ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಇಂದಿನ ಪಂದ್ಯಕ್ಕೆ ಇಬ್ಬರನ್ನೂ ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ-ಆಸ್ಟ್ರೇಲಿಯಾ ಹೈ ವೋಲ್ಟೇಜ್ ಸರಣಿ ಇಂದಿನಿಂದ