ದುಬೈ: ಐಸಿಸಿ ಟೆಸ್ಟ್ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಹೊಸ ವರ್ಷದಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಸರಣಿ ನಡೆಯುತ್ತಿದ್ದರೂ ದ್ವಿತೀಯ ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್ ಗೆ ಹೆಚ್ಚಿನ ಅಂಕ ಸಂಪಾದಿಸಲು ಸಾಧ‍್ಯವಾಗಿಲ್ಲ. ಹೀಗಾಗಿ ಕೊಹ್ಲಿಯೇ ನಂ. 1 ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಆಸ್ಟ್ರೇಲಿಯಾದ ಸೆನ್ಸೇಷನ್ ಮಾರ್ನಸ್ ದ್ವಿಶತಕ ಸಿಡಿಸಿ ಮೂರನೇ ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾದ ಇನ್ನೊಬ್ಬ ಬ್ಯಾಟ್ಸ್ ಮನ್ ಅಜಿಂಕ್ಯಾ ರೆಹಾನೆ ಎರಡು ಸ್ಥಾನಕ್ಕೆ ಕೆಳಕ್ಕಿಳಿದಿದ್ದು ಒಂಭತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಆರು, ರವಿಚಂದ್ರನ್ ಅಶ್ವಿನ್ ಒಂಭತ್ತು ಮತ್ತು ಮೊಹಮ್ಮದ್ ಶಮಿ 10 ನೇ ಸ್ಥಾನದಲ್ಲಿದ್ದಾರೆ.