ಇಶಾಂತ್ ಶರ್ಮಾ ವೇದಾಂತ ಹೇಳಿದ್ರೆ ವಿರಾಟ್ ಕೊಹ್ಲಿ ಹೀಗನ್ನೋದಾ?!

ಸೋಮವಾರ, 13 ಜನವರಿ 2020 (09:01 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರನ್ನು ಆಗಾಗ ಕಿಚಾಯಿಸುವುದರಲ್ಲಿ ಎತ್ತಿದ ಕೈ. ಇದೀಗ ವೇಗಿ ಇಶಾಂತ್ ಶರ್ಮಾರನ್ನೂ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡಿದ್ದಾರೆ.


ಇಶಾಂತ್ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮದೇ ಫೋಟೋ ಪ್ರಕಟಿಸಿ ‘ನಮಗೆಲ್ಲಾ ಜೀವನ ಒಂದೇ’ ಎಂಬ ಅರ್ಥ ಬರುವ ಸಾಲು ಬರೆದುಕೊಂಡಿದ್ದರು. ಇದನ್ನು ನೋಡಿದ ಕೊಹ್ಲಿ ಇಶಾಂತ್ ಕಾಲೆಳೆದಿದ್ದಾರೆ.

‘ಹೌದಾ ನನಗೆ ಗೊತ್ತೇ ಇರಲಿಲ್ಲ’ ಎನ್ನುವ ಮೂಲಕ ಕೊಹ್ಲಿ ಗೆಳೆಯನ ಹಾಸ್ಯ ಮಾಡಿದ್ದಾರೆ. ಸದ್ಯಕ್ಕೆ ಇಶಾಂತ್ ಟೀಂ ಇಂಡಿಯಾದಿಂದ ಬಿಡುವಿನಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೈನಾ ನೆಹ್ವಾಲ್ ಜತೆಗಿನ ವಿರಸದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕೋಚ್ ಗೋಪಿಚಂದ್