ಭಾರತ-ಆಸ್ಟ್ರೇಲಿಯಾ ಏಕದಿನ: ಟೀಂ ಇಂಡಿಯಾ 255 ಕ್ಕೆ ಆಲೌಟ್

ಮಂಗಳವಾರ, 14 ಜನವರಿ 2020 (17:47 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗೆ ಗೆಲ್ಲಲು 256 ರನ್ ಗಳ ಸುಲಭ ಗುರಿ ನೀಡಿದೆ.


ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತದ ಆರಂಭವೇ ಉತ್ತಮವಾಗಿರಲಿಲ್ಲ. ರೋಹಿತ್ ಶರ್ಮಾ 10 ರನ್ ಗಳಿಸಿ ನಿರ್ಗಮಿಸಿದಾಗಲೇ ರನ್ ವೇಗಕ್ಕೆ ಕಡಿವಾಣ ಬಿತ್ತು. ಆದರೆ ಅದಾದ ಬಳಿಕ ಶಿಖರ್ ಧವನ್ ಮತ್ತು ಕೆಎಲ್ ರಾಹುಲ್ ಉತ್ತಮ ಜತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

ಆದರೆ 47 ರನ್ ಗಳಿಸಿದಾಗ ರಾಹುಲ್ ಔಟಾದರೆ ಅವರ ಬೆನ್ನಿಗೇ 74 ರನ್ ಗಳಿಸಿದ್ದ ಧವನ್ ಕೂಡಾ ಪೆವಿಲಿಯನ್ ಗೆ ಸೇರಿಕೊಂಡರು. ಬ್ಯಾಟಿಂಗ್ ನಲ್ಲಿ ಹಿಂಬಡ್ತಿ ಪಡೆದ ನಾಯಕ ಕೊಹ್ಲಿ ಕೇವಲ 16 ರನ್ ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ರಿಷಬ್ ಪಂತ್ (28) ಮತ್ತು ರವೀಂದ್ರ ಜಡೇಜಾ (25) ಕೊಂಚ ಸುಧಾರಣೆ ತಂದರೂ ಇವರಿಂದಲೂ ಮೊತ್ತ ಉಬ್ಬಿಸಲು ಸಾಧ‍್ಯವಾಗಲಿಲ್ಲ. ಅಂತಿಮವಾಗಿ ಭಾರತ 49.1 ಓವರ್ ಗಳಲ್ಲಿ 255 ಕ್ಕೆ ಆಲೌಟ್ ಆಯಿತು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಣಜಿ ಕ್ರಿಕೆಟ್: ಸೌರಾಷ್ಟ್ರ ವಿರುದ್ಧ ಹೋರಾಡಿ ಡ್ರಾ ಮಾಡಿಕೊಂಡ ಕರ್ನಾಟಕ