Select Your Language

Notifications

webdunia
webdunia
webdunia
webdunia

ರಣಜಿ ಕ್ರಿಕೆಟ್: ಸೌರಾಷ್ಟ್ರ ವಿರುದ್ಧ ಹೋರಾಡಿ ಡ್ರಾ ಮಾಡಿಕೊಂಡ ಕರ್ನಾಟಕ

ರಣಜಿ ಕ್ರಿಕೆಟ್: ಸೌರಾಷ್ಟ್ರ ವಿರುದ್ಧ ಹೋರಾಡಿ ಡ್ರಾ ಮಾಡಿಕೊಂಡ ಕರ್ನಾಟಕ
ರಾಜ್ ಕೋಟ್ , ಮಂಗಳವಾರ, 14 ಜನವರಿ 2020 (16:05 IST)
ರಾಜ್ ಕೋಟ್: ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಪಂದ್ಯವನ್ನು ಕರ್ನಾಟಕ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡನೇ ಇನಿಂಗ್ಸ್ ನಲ್ಲಿ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.


ಮೊದಲನೇ ಇನಿಂಗ್ಸ್ ನಲ್ಲಿ ಸೌರಾಷ್ಟ್ರ 7 ವಿಕೆಟ್ ನಷ್ಟಕ್ಕೆ 581 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದನ್ನು ಬೆನ್ನತ್ತಿದ ಕರ್ನಾಟಕ ಕೇವಲ 171 ರನ್ ಗಳಿಗೆ ಆಲೌಟ್ ಆಯಿತು. ಹೀಗಾಗಿ ಫಾಲೋ ಪಡೆದ ಕರ್ನಾಟಕ ಇಂದು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 4 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತು.

ಕರ್ನಾಟಕ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ರೋಹಿತ್ ಕದಂ 42, ರವಿಕಾಂತ್ ಸಮರ್ಥ್ 74 ಮತ್ತು ದೇವದತ್ತ ಪಡಿಕ್ಕಲ್ ಔಟಾಗದೇ 53 ರನ್ ಗಳಿಸಿದರು. ಮೊದಲ ಇನಿಂಗ್ಸ್ ನಲ್ಲಿ ಸೌರಾಷ್ಟ್ರ ಪರ ದ್ವಿಶತಕ ಸಿಡಿಸಿದ್ದ ಚೇತೇಶ್ವರ ಪೂಜಾರ ಪಂದ್ಯ ಪುರುಷ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಏಕದಿನ: ಟಾಸ್ ಗೆದ್ದ ಆಸೀಸ್