ಹೀನಾಯ ಸೋಲಿನಿಂದ ಹೀನಾಯ ದಾಖಲೆಯೂ ವಿರಾಟ್ ಕೊಹ್ಲಿ ಪಾಲಾಯ್ತು

ಬುಧವಾರ, 15 ಜನವರಿ 2020 (09:10 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ತವರಿನಲ್ಲಿ 10 ವಿಕೆಟ್ ಗಳಿಂದ ಸೋಲುವುದರೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇಡದ ದಾಖಲೆಯನ್ನು ತಮ್ಮದಾಗಿಸಿದ್ದಾರೆ.


ಈ ರೀತಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಿಂದ 10 ವಿಕೆಟ್ ಗಳಿಂದ ಸೋತ ಮೊದಲ ಭಾರತೀಯ ನಾಯಕ ಎಂಬ ಹೀನಾಯ ದಾಖಲೆಗೆ ಕೊಹ್ಲಿ ಪಾತ್ರರಾದರು. ಅಷ್ಟೇ ಅಲ್ಲದೆ ವಾಂಖೆಡೆ ಮೈದಾನದಲ್ಲಿ ಭಾರತ ಸತತವಾಗಿ ಮೂರನೇ ಸೋಲನುಭವಿಸಿತು.

ಪಂದ್ಯದ ಬಳಿಕ ಮಾತನಾಡಿರುವ ಕೊಹ್ಲಿ ಈ ಒಂದು ಸೋಲಿನಿಂದ ಯಾರೂ ಕಂಗೆಡಬೇಕಿಲ್ಲ. ನಮ್ಮ ಯೋಜನೆಯನ್ನು ನಾವು ಪುನರ್ ಪರಿಶೀಲಿಸಬೇಕಿದೆ ಎಂದು ತಮ್ಮ ಬ್ಯಾಟಿಂಗ್ ಹಿಂಬಡ್ತಿ ಪ್ರಯೋಗವನ್ನು ಉಲ್ಲೇಖಿಸಿ ಕೊಹ್ಲಿ ಹೇಳಿದ್ದಾರೆ. ಮುಂದಿನ ಪಂದ್ಯಕ್ಕೆ ಮತ್ತಷ್ಟು ಸಿದ್ಧತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾಕ್ಕೆ ಭಾರೀ ಮುಖಭಂಗ