Publish Date: Wed, 22 Jan 2020 (06:53 IST)
Updated Date: Wed, 22 Jan 2020 (06:54 IST)
ಗಾಂಧಿನಗರ : ವಧುವಿನ ತಾಯಿ ಹಾಗೂ ವರನ ತಂದೆ ಮಾಡಿದ ಕೆಲಸದಿಂದ ನಡೆಯಬೇಕಿದ್ದ ಪ್ರೇಮಿಗಳ ಮದುವೆಯೇ ರದ್ದಾದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಹೌದು. ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ತಮ್ಮ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ನಿರ್ಧರಿಸಿದ್ದರು. ಮುಂದಿನ ತಿಂಗಳು ಅವರ ಮದುವೆ ಕೂಡ ಫಿಕ್ಸ್ ಆಗಿತ್ತು. ಆದರೆ ಮದುವೆ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿಯೇ ವಧುವಿನ ತಾಯಿ ವರನ ತಂದೆ ಜೊತೆ ಓಡಿ ಹೋಗಿದ್ದಾಳೆ.
ಇವರಿಬ್ಬರು ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದರು, ಬೇರೆ ಬೇರೆ ಮದುವೆಯಾಗಿದ್ದರು. ಆದರೆ ಈಗ ಮಕ್ಕಳ ಮದುವೆ ತಯಾರಿಯಲ್ಲಿ ಒಂದಾದ ಇವರ ನಡುವೆ ಮತ್ತೆ ಪ್ರೀತಿ ಚಿಗುರಿ ಇಂತಹ ನೀಚ ಕೆಲಸ ಮಾಡಿದ್ದಾರೆ. ಇದರಿಂದ ಪ್ರೇಮಿಗಳ ಮದುವೆ ರದ್ದಾಗಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಅವರಿಬ್ಬರ ಹುಡುಕಾಟ ನಡೆಸುತ್ತಿದ್ದಾರೆ.