Select Your Language

Notifications

webdunia
webdunia
webdunia
webdunia

ಪ್ರೀತಿಸಿ ಮದುವೆಯಾಗುತ್ತೇನೆಂದು ನಂಬಿಸಿ ಯುವತಿಗೆ 15 ಲಕ್ಷ ಪಂಗನಾಮ ಹಾಕಿದ ಭೂಪ

ಚಿತ್ರದುರ್ಗ
ಚಿತ್ರದುರ್ಗ : ಯುವಕನೊಬ್ಬ ಪ್ರೀತಿಸಿ ಮದುವೆಯಾಗುತ್ತೇನೆಂದು ನಂಬಿಸಿ ಯುವತಿಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ದೋಚಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.


ಉಮೇಶ್ ಪ್ರೀತಿ ನಾಟಕವಾಡಿ ಹಣ ದೋಚಿದ ವ್ಯಕ್ತಿ. ಯುವತಿಯೊಬ್ಬಳನ್ನು ಸ್ನೇಹ ಮಾಡಿಕೊಂಡ ಈತ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ತನ್ನ ಉನ್ನತ ಶಿಕ್ಷಣಕ್ಕೆ  ಹಣ ಬೇಕೆಂದು ಆಕೆಯಿಂದ 15 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ.

 

ಆದರೆ ಆತ ಅನೇಕ ಯುವತಿಯರ ಜೊತೆ ಪ್ರೀತಿಯ ನಾಟಕವಾಡಿ ಅನೈತಿಕ ಸಂಬಂಧ ಹೊಂದಿದ್ದ ಎಂಬ ವಿಚಾರ ತಿಳಿದ ಯುವತಿ ಆತನಿಂದ ಹಣ ವಾಪಾಸು ಕೇಳಿದ್ದಾಳೆ. ಆದರೆ ಆತ ಆಕೆಯ ಮೇಲೆ ದೌರ್ಜನ್ಯವೆಸಗಿದ್ದ ಹಿನ್ನಲೆಯಲ್ಲಿ ಇದೀಗ ಯುವತಿ ಚಿತ್ರದುರ್ಗದ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಫ್ರಿನ್ಸ್ ಹ್ಯಾರಿಗೆ ಪಾರ್ಟ್ ಟೈಮ್ ಜಾಬ್ ಆಫರ್ ನೀಡಿದ ಬರ್ಗರ್ ಕಿಂಗ್