ಬೆಂಗಳೂರು: ಕರ್ನಾಟಕದ ಕುರ್ಚಿ ಫೈಟ್ ಬಗೆಹರಿಸುವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳ ಮುಂದೆಯೇ ಅಸಹಾಯಕತೆ ಪ್ರದರ್ಶಿಸಿದ್ದಾರೆ. ಇನ್ನು ರಾಹುಲ್ ಗಾಂಧಿಯೇ ಬರಬೇಕಿದೆ.
ಮಲ್ಲಿಕಾರ್ಜುನ ಖರ್ಗೆ ಎರಡು ದಿನದಿಂದ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರ ಜೊತೆ ಮೀಟಿಂಗ್ ಮಾಡುತ್ತಲೇ ಇದ್ದಾರೆ. ಆದರೆ ಯಾರ ಜೊತೆ ಮೀಟಿಂಗ್ ಮಾಡಿದರೂ ಕುರ್ಚಿ ಫೈಟ್ ಬಗೆಹರಿಯುತ್ತಿಲ್ಲ.
ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅಸಹಾಯಕರಾಗಿದ್ದಾರೆ. ಯಾರನ್ನೂ ಒಪ್ಪಿಸುವ ಪರಿಸ್ಥಿತಿಯಲ್ಲಿ ಇಲ್ಲ. ನನ್ನ ಹತ್ತಿರ ಹೇಳಲು ಏನೂ ಇಲ್ಲ. ಏನಿದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಹೇಳಿದ್ರೆ ಚೆನ್ನಾಗಿರಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದೀಗ ರಾಹುಲ್ ಗಾಂಧಿ ಬಳಿ ಎಲ್ಲವನ್ನೂ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಸಮಸ್ಯೆ ಬಗೆಹರಿಸಲು ತಮ್ಮಿಂದಂತೂ ಆಗುತ್ತಿಲ್ಲ. ಹೀಗಾಗಿ ರಾಜ್ಯದ ಸಮಸ್ಯೆಯನ್ನು ರಾಹುಲ್ ಗಾಂಧಿಯೇ ಸರಿಪಡಿಸಲಿ ಎಂದು ಅವರು ಕೈ ಚೆಲ್ಲಿದ್ದಾರೆ.