Publish Date: Tue, 04 Sep 2018 (09:14 IST)
Updated Date: Tue, 04 Sep 2018 (09:15 IST)
ನವದೆಹಲಿ: ಭ್ರಷ್ಟಾಚಾರ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಇದೀಗ ಅನಾರೋಗ್ಯದ ಕಾರಣದಿಂದ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆದರೆ ಇದೀಗ ಲಾಲೂ ಯಾದವ್ ತಮ್ಮನ್ನು ಬೇರೆ ವಾರ್ಡ್ ಗೆ ಶಿಫ್ಟ್ ಮಾಡುವಂತೆ ಕೋರಿದ್ದಾರಂತೆ. ಅದಕ್ಕೆ ಕಾರಣ ಸೊಳ್ಳೆ ಕಡಿತ, ಕೆಟ್ಟ ವಾಸನೆ ಮತ್ತು ನಾಯಿಗಳ ಬೊಗಳುವಿಕೆ. ಇದರಿಂದಾಗಿ ನನಗೆ ವಿಶ್ರಾಂತಿ ಇಲ್ಲದಾಗಿದೆ ಎಂದು ಲಾಲೂ ಯಾದವ್ ಬೇರೆ ವಾರ್ಡ್ ಗೆ ಶಿಫ್ಟ್ ಮಾಡಲು ಕೋರಿದ್ದಾರಂತೆ.
ಲಾಲೂ ಯಾದವ್ ಇರುವ ವಾರ್ಡ್ ನಲ್ಲಿ ಟಾಯ್ಲೆಟ್ ಪೈಪ್ ಬ್ಲಾಕ್ ಆಗಿ ವಿಪರೀತ ಕೆಟ್ಟ ವಾಸನೆ, ಸೊಳ್ಳೆ ಕಡಿತ ಜಾಸ್ತಿಯಾಗಿದೆ. ಇದರಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆಯಿದೆ. ಅದಕ್ಕೆ ಬೇರೆ ವಾರ್ಡ್ ಕೇಳಿದ್ದಾರೆ ಎಂದು ಆರ್ ಜೆಡಿ ಮೂಲಗಳು ತಿಳಿಸಿವೆ. ಇದೀಗ ಲಾಲೂ ಮನವಿಯನ್ನು ಆಸ್ಪತ್ರೆಯ ನಿರ್ದೇಶಕರು ಪರಿಶೀಲನೆ ನಡೆಸುತ್ತಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.