ನಂದಮುರಿ ಹರಿಕೃಷ್ಣ ಪಾರ್ಥೀವ ಶರೀರದೊಂದಿಗೆ ಸೆಲ್ಫಿ ತೆಗೆಸಿಕೊಂಡ ಕಾಮಿನೇನಿ ಆಸ್ಪತ್ರೆ ಸಿಬ್ಬಂದಿಗಳು

ಶನಿವಾರ, 1 ಸೆಪ್ಟಂಬರ್ 2018 (11:25 IST)
ಹೈದರಾಬಾದ್ : ಇತ್ತೀಚೆಗಷ್ಟೇ ಕಾರು ಅಪಘಾತದಲ್ಲಿ ಮೃತಪಟ್ಟ ನಂದಮುರಿ ಹರಿಕೃಷ್ಣ ಅವರ ಪಾರ್ಥೀವ ಶರೀರದೊಂದಿಗೆ ಸೆಲ್ಪಿ ತೆಗೆಸಿಕೊಂಡ ಕಾಮಿನೇನಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.


ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಹರಿಕೃಷ್ಣ ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಆಗ ಅವರ ಮೃತದೇಹವನಿಟ್ಟುಕೊಂಡು ಆಸ್ಪತ್ರೆಯ ಇಬ್ಬರು ನರ್ಸ್ಗಳು, ಒಬ್ಬ ವಾರ್ಡ್ ಬಾಯ್, ವಾರ್ಡ್ ಗರ್ಲ್ ಸ್ಲೈಲ್ ನೊಂದಿಗೆ ಸೆಲ್ಪಿ ತೆಗೆಸಿಕೊಂಡಿದ್ದಾರೆ.


ಈ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಕಾರಣ ಕಾಮಿನೇನಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ನಿರ್ದೇಶಕ ಎಸ್ ನಾರಾಯಣ್‌ ಗೆ ತಮಿಳುನಾಡು ಮೂಲದ ಜ್ಯೋತಿಷಿಯಿಂದ ವಂಚನೆ