Select Your Language

Notifications

webdunia
webdunia
webdunia
webdunia

ಬುಕ್ ಮೈ ಶೋ ಹಾಗೂ ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ ಮೇಲೆ ಕಿಡಿಕಾರಿದ ನಟ ಸತೀಶ್. ಕಾರಣವೇನು ಗೊತ್ತಾ?

ಬುಕ್ ಮೈ ಶೋ ಹಾಗೂ ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ ಮೇಲೆ ಕಿಡಿಕಾರಿದ ನಟ ಸತೀಶ್. ಕಾರಣವೇನು ಗೊತ್ತಾ?
ಬೆಂಗಳೂರು , ಸೋಮವಾರ, 27 ಆಗಸ್ಟ್ 2018 (08:54 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ನೀನಾಸಂ ಸತೀಶ್ ನಟಿಸಿದ ‘ಅಯೋಗ್ಯ' ಚಿತ್ರ ಪ್ರದರ್ಶನಕ್ಕೆ  ಹೈದರಾಬಾದ್‌ನ ಮಲ್ಟಿಪ್ಲೆಕ್ಸ್‌ನಲ್ಲಿಅವಕಾಶ ಸಿಗದ ಹಿನ್ನಲೆಯಲ್ಲಿ ಭಾನುವಾರ ಫೇಸ್‌ಬುಕ್‌ ಲೈವ್ ಬಂದ ನಟ ಸತೀಶ್ ಬುಕ್ ಮೈ ಶೋ ಸೇರಿದಂತೆ ಮಲ್ಟಿಫ್ಲೆಕ್ಸ್ ಹಾಗೂ ಹೈದರಾಬಾದ್ ಫಿಲಂ ಚೆಂಬರ್‌ ವಿರುದ್ಧ ಕಿಡಿಕಾರಿದ್ದಾರೆ.


ಗ್ರಾಮೀಣ ಶೈಲಿಯಲ್ಲಿ ಮೂಡಿಬಂದ ‘ಅಯೋಗ್ಯ' ಚಿತ್ರವು ಇದೇ ತಿಂಗಳ 17 ರಂದು ಕರ್ನಾಟಕದಲ್ಲಿ ಸುಮಾರು 150 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ದೊಕಿದ್ದು, ಇದೀಗ ಚಿತ್ರ 10 ಕೋಟಿ ರೂಪಾಯಿ ಸಂಗ್ರಹ ಮಾಡಿದೆ.


ಆದರೆ 'ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ ನಲ್ಲಿ ಚಿತ್ರ ಪ್ರದರ್ಶಿಸಲು ಅಲ್ಲಿನ ವಾಣಿಜ್ಯ ಮಂಡಳಿಯ ಅನುಮತಿ ಬೇಕೆಂದು ತಕರಾರು ಎತ್ತಿದ್ದ ಕಾರಣ ಗರಂ ಆದ ನಟ ಸತೀಶ್ ನಮ್ಮ ರಾಜ್ಯದಲ್ಲಿ ಪರಭಾಷೆ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಪಕ್ಕದ ಹೈದರಾಬಾದ್ ನಲ್ಲಿ ಎರಡು ಶೋ ಹಾಕಲು ಅವಕಾಶ ಸಿಗುತ್ತಿಲ್ಲ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ಸಲ್ಲಿಸುತ್ತೇನೆ ಎಂದಿದ್ದಾರೆ.


ಬುಕ್ ಮೈ ಶೋದಲ್ಲಿ ಯಾರೋ ನಾಲ್ಕು ಜನ ಕೆಟ್ಟದಾಗಿ ಬರೆದ ಮಾತ್ರಕ್ಕೆ ಸಿನಿಮಾದ ಮೇಲೆ ಯಾವ ಪರಿಣಾಮ ಬೀರಲ್ಲ. ಕೆಟ್ಟದಾಗಿ ಬರೆಯುವವರಿಗೆ ಎಚ್ಚೆರಿಕೆಯನ್ನು ನೀಡಬೇಕಾಗುತ್ತದೆ ಎಂದು ಸತೀಶ್ ಗುಡುಗಿದ್ದಾರೆ.


ಮಾಧ್ಯಮಗಳಿಗೂ ಧನ್ಯವಾದ ತಿಳಿಸಿದ  ನಂತರ ಮನವಿ ಮಾಡಿಕೊಂಡಿರುವ ಸತೀಶ್ ದಯವಿಟ್ಟು ಕನ್ನಡ ಸಿನಿಮಾ ಉಳಿಸಿ. ನಮ್ಮ ನೆಲದಲ್ಲಿ ಬೇರೆಯವರು ಬಂದು ಹಣ ಮಾಡಿಕೊಂಡು ಹೋಗುತ್ತಿದ್ದಾರೆ. ಹೊರ ರಾಜ್ಯದಲ್ಲಿ ಒಂದೇ ಒಂದು ಥಿಯೇಟರ್ ಪಡೆದುಕೊಳ್ಳಬೇಕಾದರೆ 120 ಜನರ ಅನುಮತಿ ಬೇಕು? ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟ ಪ್ರಣಾಮ್ ದೇವರಾಜ್